ನಗುವಿನ ಬಗ್ಗೆ ನಿಮಗೆ ಗೊತ್ತಿರದ 8 ಸಂಗತಿಗಳು
ನಗು 'ನಗು' ಎಂದು ಓದಿದ ತಕ್ಷಣ ನಿಮ್ಮ ಮೊಗದಲ್ಲಿ ನಗು ಮೂಡಿತೇ..? ನಗು ಯಾರಿಗೆ ಗೊತ್ತಿಲ್ಲ, ಹೇಳಿ.. ಮಗುವಿನಿಂದ ಹಿಡಿದು ಮುದುಕರವರೆಗೆ ಎಲ್ಲರೂ ನಗುವಿನ ಅಲೆಯಲ್ಲಿ ತೇಲಾಡಿದವರೆ ಅಲ್ಲವೇ? ಹಾಗಿದ್ದರೆ ನಗುವಿನ ಬಗ್ಗೆ ನಿಮಗೆಷ್ಟು ಗೊತ್ತು ನೋಡೋಣ ಬನ್ನಿ. ನಗುವಿನ ಬಗ್ಗೆ ನಿಮಗೆ ಗೊತ್ತಿರದ 8 ಸಂಗತಿಗಳು 1. ನಗುವುದು ಒಂದು ಸಾಂಕ್ರಾಮಿಕ:- ಹೌದು ಇದು ನಿಜ. ಅಯ್ಯಯ್ಯೋ...? ಭಯಪಡಬೇಡಿ. ಇದು ಕಹಿ ಅಲ್ಲ ಸಿಹಿ ಸತ್ಯ. ಅಂದರೆ ನಗು ಆರೋಗ್ಯವನ್ನು ಹೆಚ್ಚಿಸುವ ಸಾಂಕ್ರಾಮಿಕ. ...